Wednesday, January 11, 2023

ಶೈಕ್ಷಣಿಕ ಪ್ರವಾಸ


 ನಾನು ಮಾಡಿದ ಶೈಕ್ಷಣಿಕ ಪ್ರವಾಸದ ವರದಿ 19 12 2022 ರಂದು ಒಂದು ಗಂಟೆಗೆ ನಾವು ಊರುನ್ನು ಬಿಟ್ಟೆವು ಬೆಳಗ್ಗೆ 6 ಗಂಟೆಗೆ ಶಿರಸಿಗೆ ಹೋಗಿ ತಲುಪಿ ಅಲ್ಲಿರುವ ಮಾರಿಕಾಂಬಾ ದೇವಿ ದರ್ಶನ ಮಾಡಿ ದೇವಸ್ಥಾನದಲ್ಲಿರುವ ದೇವಿಯ ಕೋಣೆ ನೋಡಿ ದೇವಸ್ಥಾನವನ್ನು ಸುತ್ತಾಡಿ ಬಂದೆವು ಹಲ್ಲುಜ್ಜಿ ಮುಖ ತೊಳೆದು ಮುಂದಕ್ಕೆ ಹೋದೆವು ಯಾಣ ತಲಪಿ ಊಟ ಮಾಡಿ ಮತ್ತು ಗುಡ್ಡ ಬೆಟ್ಟ ಮರಗಳನ್ನು ನೋಡಿದೆವು ಮತ್ತು ಬೆಟ್ಟ ಹತ್ತಿ ಯಾಣ ನೋಡಿ ಕೆಳಗೆ ಇಳಿದು ಬಸ್ಸಿನಲ್ಲಿ ಕುಳಿತು ಪ್ರವಾಸ ಮುಂದುವರಿಸಿದೆವು ಮತ್ತು ಮಿರ್ಜಾನ್  ಕೋಟೆಯಲ್ಲಿ ಬಸ್ ನಿಲ್ಲಿಸಿ ಕೋಟೆ ಒಳಗೆ ಹೋಗಿ ಕೋಟೆಯನ್ನು ನೋಡಿ ಅಲ್ಲಿ ಎಲ್ಲರೂ ಒಂದು ಗ್ರೂಪ್ ಫೋಟೋ ತೆಗೆದು ಕೊಂಡು ಒಂದು ಬಸ್ಸಿನಲ್ಲಿ ಕುಳಿತು ಪ್ರಯಾಣ ಮುಂದುವರಿಸಿದವು  ಅಲ್ಲಿಂದ ಮುರುಡೇಶ್ವರ ತಲುಪಿ ಸಮುದ್ರ ತೀರದಲ್ಲಿ ಆಟ ಆಡಿ ಸ್ನಾನ ಮಾಡಿ ದೇವರ ದರ್ಶನಕ್ಕೆ ಹೋದೆವು ದೇವರ ದರ್ಶನ ಮಾಡಿ  ಶಿವನ ಮೂರ್ತಿ ಕೃಷ್ಣನ ರಥ  ನೋಡಿ ದೇವಸ್ಥಾನವನ್ನು ಸುತ್ತು ಹಾಕಿ ಮತ್ತೆ ಬಸ್ಸಿನಲ್ಲಿ ಬಂದು ಕುಳಿತೇವು ಪ್ರಯಾಣ ಮುಂದುವರಿಸಿದೆವು ಮುರುಡೇಶ್ವರ ನಂತರ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಹೋಗಿ ಊಟ ಮಾಡಿ ಅಲ್ಲೇ ಇದ್ದೆವು ಮೂರನೇ ದಿನ ಬೆಳಗ್ಗೆ ಎದ್ದು ಹಲ್ಲುಜ್ಜಿ ಸ್ನಾನ ಮಾಡಿ ತಲೆ ಬಾಚಿಕೊಂಡು ದೇವಿ ದರ್ಶನ ಮಾಡಿ ಪ್ರಯಾಣ ಮುಂದುವರಿಸಿದವು ಅಲ್ಲಿಂದ ಕುಂಭಾಸೆಗೆ ಹೋಗಿ ನಾಷ್ಟ ಮಾಡಿ ಮುಂದಕ್ಕೆ ಹೋದೆವು ಮತ್ತು ಉಡುಪಿಗೆ ತಲುಪಿ ಮಲ್ಪೆ ಬೀಚನಲ್ಲಿ ಆಟ ಆಡಿ ಮತ್ತು ಉಡುಪಿಯ ಕೃಷ್ಣನ ದೇವಸ್ಥಾನದಲ್ಲಿ ಊಟ ಮಾಡಿ ದೇವಸ್ಥಾನವನ್ನು ನೋಡಿ ಮತ್ತು ಉಡುಪಿಯಲ್ಲಿರುವ ಮಣಿ ಪಾಲಿಗೆ ಹೋಗಿ ಅಲ್ಲಿರುವ ವಿಜ್ಞಾನದ ಬಗ್ಗೆ ತಿಳಿಯಲು ಮನುಷ್ಯನ ದೇಹದಲ್ಲಿರುವ ಹೃದಯ ವಿಸರ್ಜನಾಂಗ ಯುಹ ಮತ್ತು ಮೆದುಳು ಮೂತಾದವು ಆಗಂಗನ್ನು ನೋಡಿ ಮತ್ತು ಪ್ರಾಣಿಗಳು ದೇಹದಲ್ಲಿರುವ ಮೂಳೆಗಳು ಕಂಡಗಳನ್ನು ನೋಡಿ ಮತ್ತು ಸತ್ತ ಮನುಷ್ಯನ  ದೇಹವನ್ನು ನೋಡಿದೆವು ಮತ್ತು ಪ್ರಯಾಣ ಮುಂದುವರಿಸಿದೆವು ಉಡುಪಿಯ ನಂತರ ಧರ್ಮಸ್ಥಳಕ್ಕೆ ಹೋದೆವು ಅಲ್ಲಿ ಮಂಜುನಾಥ ದೇವಸ್ಥಾನದಲ್ಲಿ ಊಟ ಮಾಡಿ ಅಲ್ಲಿರುವ ಗಾಯತ್ರಿಯಲ್ಲಿರುವ ಹೊಮಾನಲ್ಲಿ ಇದ್ದೆವು ಬೆಳಿಗ್ಗೆ 4:00 ಗಂಟೆಗೆ ಎದ್ದು ಸ್ನಾನಮಾಡಿ ತಲೆಬಾಚ್ಚಿಕೊಂಡು ಮಂಜುನಾಥ ದೇವರ ದೇವಸ್ಥಾನಕ್ಕೆ ಹೋಗಿ ದರ್ಶನಮಾಡಿ ಅಲ್ಲಿರುವ ಬೆಳ್ಳಿ ಮತ್ತು ಚಿನ್ನದ ರಥವನ್ನು ನೋಡಿ ನಾಷ್ಟಾಮಾಡಿ ಪ್ರಯಾಣ ಮುಂದುವರಿಸಿದವು ಧರ್ಮಸ್ಥಳದ ನಂತರ ಶಿವರಾಮ ಕಾರಂತ  ಅವರ ಥೀಮ್ ಪಾರ್ಕ್  ಹೋಗಿ ಅಲ್ಲಿರುವ ಚಿತ್ರ ಗೊಂಬೆಗಳು ಮತ್ತು ಅವರ ರಚಿಸಿರುವ ಮುಖಜ್ಜಿಯ  ಕನಸುಗಳು  ಎಂಬ ಕೃತಿಯ ಗೊಂಬೆಗಳನ್ನು ನೋಡಿ ಅಲ್ಲಿ ಒಂದು ಗ್ರೂಪ್  ಫೋಟೋ ತೆಗೆದುಕೊಂಡು ಬಂದೆವು ಅಲ್ಲಿಂದ ಬೇಲೂರು ಚೆನ್ನಕೇಶವ ದೇವಾಲಯ ನೋಡಿ ಊಟಮಾಡಿ ಅಲ್ಲಿಂದ ಹಳೇಬೀಡು ಹೊಯ್ದಳರು ದೇವಸ್ಥಾನ ನೋಡಿದೆವು ಅಲ್ಲಿಯ ಶ್ರೀ ರಂಗಪಟ್ಟಣ ಹೋಗಿ ಊಟ ಮಾಡಿ ಅಲ್ಲೇ ಇದ್ದು ಬೆಳಗ್ಗೆ ಬೇಗನೆ ಎದ್ದು ಹಲ್ಲು ಉಜ್ಜಿ ಸ್ನಾನ ಮಾಡಿ, ತಲೆಬಾಚಿಕೊಂಡ ಮೈಸೂರಿಗೆ ಹೋದೆವು ಅಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗಿ ದೇವಿ ಚಾಮುಂಡಿ ದರ್ಶನಮಾಡಿ ದೇವಸ್ಥಾನ ನೋಡಿ ನಂತರ ಮೈಸೂರು ಜೂಗೆ ಹೋದೆವು ಸಿಂಹ ಚಿರತೆ ಆನೆ ಒಂಟೆ ಹಾವು ಜಿರಪೆ ಮತ್ತು ತರದ ಪಕ್ಷಿಗಳನ್ನು ನೋಡಿದೆವು ಮತ್ತು ಮೈಸೂರಿನಲ್ಲಿ ಊಟ ಮಾಡಿ ಮತ್ತು ಮೈಸೂರು ಅರಮನೆಗೆ ಅಲ್ಲಿಂದ ಹೋದೆವು ಒಳಗೆ ಹೋದೆವು ಅಲ್ಲೇ ಅಕ್ಕ-ತಂಗಿ ಹೋಂಡಾ ಮತ್ತು ಒನಕೆ ಓಬವ್ವ ಕಿಂಡಿಯನ್ನು ನೋಡಿದೆವು ಅಲ್ಲಿ ಮಂಕುತಿಮ್ಮ ಅಲ್ಲಿಂದ ಹೊಸಪೇಟೆ ಹೋದೆವು ಹುಲಿಗೆಮ್ಮ ದೇವಿಯನ್ನು ನೋಡಿ ದರ್ಶನ ಮಾಡಿ ಖರೀದಿಸಿದೇವು ಮತ್ತು ನಮ್ಮೂರಿಗೆ ಮಧ್ಯದಲ್ಲಿ ಗ್ರೀನ್ ಲ್ಯಾಂಡಿನಲ್ಲಿರುವ ಪೂರ್ಣಚಂದ್ರ ತೇಜಸ್ವಿ  ಅವರ ನೆನಪಿಗಾಗಿರುವ ಮನೆಯನ್ನು ನೋಡಿ ಮತ್ತು ಅವರು ಬಿಡಿಸಿದ ಚಿತ್ರಗಳನ್ನು ನೋಡಿ ಮತ್ತು ಗಾರ್ಡನ್ ನೋಡಿ ಅಂದು ದಿನಾಂಕ 24.12.2022 ರಂದು ಬಂದೆವು.