Thursday, November 25, 2021

ರಾಷ್ಟ್ರೀಯ ಐಕ್ಯತಾ ಸಪ್ತಾಹ



ರಾಷ್ಟ್ರೀಯ ಐಕ್ಯತಾ ಸಪ್ತಾಹ ಅಂಗವಾಗಿ ಜಹಗೀರ ಗುಡದೂರ  ಸರ್ಕಾರಿ ಪ್ರೌಢಶಾಲೆಯಲ್ಲಿ  ಹನುಮಸಾಗರ ಪೊಲೀಸ್ ಠಾಣೆ ಯ ಆಶ್ರಯದಲ್ಲಿ ಉಪನ್ಯಾಸ ಕಾರ್ಯಕ್ರಮನ್ನು ಜರುಗಿಸಲಾಯಿತು. ಕಾರ್ಯಕ್ರಮದಲ್ಲಿ  PSI ಶ್ರೀಯುತ ಅಶೋಕ ಬೇವೂರ ಅವರು ಉಪನ್ಯಾಸ ನೀಡುತ್ತಾ 

೧. ಅಲ್ಪ ಸಂಖ್ಯಾತರ ಅಭಿವೃದ್ಧಿ, 

೨. ಭಾಷ ಸೌಹಾರ್ದತೆ 

೩. ದುರ್ಬಲ ವರ್ಗದವರ ಏಳಿಗೆ 

೪. ಪರಿಸರ ಸಂರಕ್ಷಣೆ 

೫. ಸಾಂಸ್ಕೃತಿಕ ಐಕ್ಯತೆ 

ಜೊತೆಗೆ ಕಾನೂನಿನ ಅರಿವು  ಹಾಗೂ ನೆರವು  ಕುರಿತು ಸುದೀರ್ಘವಾದ ಉಪನ್ಯಾಸ ನೀಡುತ್ತಾ ಮಕ್ಕಳು ತಮ್ಮ ಅರಿವನ್ನು ವಿಸ್ತರಿಸಿಕೊಳ್ಳುವುದರ  ಜೊತೆಗೆ  ತಮ್ಮ ಸ್ಥಳೀಯರನ್ನು ಜಾಗೃತಗೊಳಿಸುವಂಥ ಕಾರ್ಯವನ್ನು ಮಾಡಬೇಕು ಎಂದು ತಿಳಿಸಿದರು.  ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಹಾಗೂ ದುರ್ಬಲ ವರ್ಗದವರ ಏಳಿಗೆಗೆ  ಏನೆಲ್ಲಾ ಅನುಕೂಲಗಳಿವೆ ಎಂದು ತಿಳಿಸುತ್ತಾ ಮಕ್ಕಳಿಗೆ ಪೋಕ್ಸೋ ಕಾಯ್ದೆ ಕುರಿತು ಮಕ್ಕಳಿಗೆ ಸರಳವಾಗಿ ಅರ್ಥೈಸಿದರು. ಮಕ್ಕಳು  ಕೇಳಿದ ಪ್ರಶ್ನೆಗಳಿಗೆ ಪ್ರೀತಿಯಿಂದ ಉತ್ತರಿಸುತ್ತಾ ಪೊಲೀಸರು ಮಕ್ಕಳ - ಅಬಲರ ಭಯವನ್ನು ಹೊಡೆದೊಡಿಸುವವರು ಎಂದು ತಿಳಿಯಪಡಿಸಿದರು. 

ಅಧ್ಯಕ್ಷತೆ ನುಡಿಗಳಲ್ಲಿ ಮಕ್ಕಳು ಭವಿಷ್ಯವನ್ನು ಕಟ್ಟುವವರು ಅವರಲ್ಲಿ ಅರಿವು ಮೂಡಿದರೆ ರಾಷ್ಟ್ರೀಯ ಐಕ್ಯತೆಗೆ ಅರ್ಥ ಮೂಡುತ್ತದೆ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಮಹೆಬೂಬ್ ಸಾಬ್, ಸಿದ್ದರಾಮೇಶ, ಪ್ರಶಾಂತ ಮುಖ್ಯೋಪಾಧ್ಯಾಯರಾದ ಸಂಗನಗೌಡ ಪಾಟೀಲ್, ಶಿವಪ್ಪ ಇಲಾಳ, ಜಗದೀಶ ಬಾಸಿಂಗದ , ತಿಪ್ಪಣ್ಣ ರಾಮದುರ್ಗ, ಬಸಪ್ಪ ಹಿರೇಮನಿ, ಶರಣಪ್ಪ ರಾಂಪೂರ, ರಮೇಶ ಚೌಹಣ, ಹುಲಿಗೆಮ್ಮ, ಈರಮ್ಮ ಕೃಷ್ಟಪ್ಪನವರ ಭಾಗವಹಿಸಿದ್ದರು. ಕಾರ್ಯಮದ ನಿರ್ವಹಣೆಯನ್ನು ರಂಗ ಶಿಕ್ಷಕರಾದ ಗುರುರಾಜ ಅವರು ವಹಿಸಿದ್ದರು.