Monday, February 22, 2021

ಎಸ್ ಡಿ ಎಂ ಸಿ ಸದಸ್ಯರ ತರಬೇತಿ ಕಾರ್ಯಗಾರ

ಎಸ್ ಡಿ ಎಂ ಸಿ ಸದಸ್ಯರ ತರಬೇತಿ

ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆಯವತಿಯಿಂದ ಇಂದು ಸರಕಾರಿ ಪ್ರೌಢಶಾಲೆ, ಜಹಗೀರಗುಡದೂರ ನಲ್ಲಿ ಎಸ್.ಡಿ.ಎಮ್.ಸಿ ಸದಸ್ಯರ ತರಬೇತಿ ಕಾರ್ಯಕ್ರಮವನ್ನು ದಿನಾಂಕ ೨೨.೦೨.೨೦೨೧ ರಂದು ನಡೆಸಲಾಯಿತು.

ಪ್ರಾಸ್ತಾವಿಕ ಮಾತನಾಡಿದ ಸಿ ಆರ್ ಪಿ ಯವರಾದ ಶ್ರೀ ಭರಮಪ್ಪ ಪರಸಾಪೂರನವರು ಇಂದು ಈ ತರಬೇತಿಯಲ್ಲಿ ಶೇಕಡಾ ೯೦% ಸದಸ್ಯರು ಹಾಜರಾಗಿದಕ್ಕೆ ಸಂತೋಷವಾಗುತ್ತದೆ. ಎಸ್ ಡಿ ಎಂ ಸಿ ಸದಸ್ಯರು ಶಾಲೆಯ ಅಭಿವೃದ್ಧಿಯ ಕಡೇ ಗಮನ ನೀಡುತ್ತಿರವುದರಿಂದ ಶಾಲೆಗಳು ಎಲ್ಲ ಹಂತ

ಗಳಲ್ಲಿ ಉತ್ತಮವಾಗಿ ಫಲಿತಾಂಶ ನೀಡುತ್ತಿವೆ. ಗ್ರಾಮ ಪಂಚಾಯಿತಿ ಅನುದಾನದಲ್ಲಿ  ಶೇಕಡಾ ೩೦% ಶೈಕ್ಷಣಿಕ ಕ್ಕೆ ಮೀಸಲಿದೆ ಎನ್ನುವುದನ್ನು ನಾವು ಗಮನ ಹರಿಸಬೇಕಾಗಿದೆ. ಅದನ್ನು ಸಮರ್ಪಕವಾಗಿ ಬಳಸುವದರಿಂದ ವಿದ್ಯಾರ್ಥಿಗಳ  ಶೈಕ್ಷಣಿಕ ಅಭಿವೃದ್ಧಿ ಇನ್ನೂ ಉತ್ತಮವಾಗಬಹುದು ಎಂದು  ತಿಳಿಯಪಡಿಸಿದರು. ತರಬೇತಿಯನ್ನು ಉದ್ಘಾಟಸಿ ಮಾತಾನಾಡಿದ  ಮುಖ್ಯೋಪಾಧ್ಯಯರಾದ ಶ್ರೀ ಈಶಪ್ಪ ತಳವಾರ ಅವರು ನಮ್ಮ ಶಾಲೆಯನ್ನು ಎಲ್ಲರೂ ಸೇರಿ ಒಗ್ಗೂಡಿ ನಮ್ಮ ಶಾಲೆಗೆ, ಮಕ್ಕಳಿಗೆ  ಸಿಗಬೇಕಾದ ಸೌಲಭ್ಯಗಳನ್ನು ಒದಗಿಸುವ ಕಡೇ ಗಮನ ನೀಡೋಣ. ಆಗ ನಮ್ಮ ಮಕ್ಕಳು ಪ್ರತಿ ಹಂತದಲ್ಲೂ ಶ್ರೇಷ್ಠರಾಗಿ ಸಮಾಜದಲ್ಲಿ ಮುನ್ನಡೆಯುತ್ತಾರೆ ಮತ್ತು ನಾಡನ್ನು ಮುನ್ನೆಡೆಸುತ್ತಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ  ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ತಿಪ್ಪಣ್ಣ ರಾಮದುರ್ಗ, ಶಿವಪ್ಪ ಇಲಾಳ, ಜಗದೀಶ ಬಾಸಿಂಗದ, ಸಂಗನಗೌಡ ಪಾಟೀಲ, ಶರಣಪ್ಪ, ಬಸಪ್ಪ , ರಮೇಶ, ಪ್ರಶಾಂತ ಕಟ್ಟಿ ಹಾಗೂ ಗುರುರಾಜ ಅವರು ಉಪಸ್ಥಿತರಿದ್ದರು.



Wednesday, February 17, 2021

ಇಂಗ್ಲೀಷ್ ಭಾಷಾ ವಿಷಯದ ಕಾರ್ಯಗಾರ

 ಇಂದು ದಿನಾಂಕ 17.02.2021 ರಂದು ಸರಕಾರಿ ಪ್ರೌಢಶಾಲೆ ಜಹಗೀರಗುಡದೂರನಲ್ಲಿ ಇಂಗ್ಲೀಷ್ ಭಾಷಾ ವಿಷಯದ ಕಾರ್ಯಗಾರ ನಡೆಯಿತು. ಕಾರ್ಯಕ್ರಮ ದ ಉದ್ಘಾಟನೆ ಯನ್ನು ಡಯಟ್ ನ ಹಿರಿಯ ಉಪನ್ಯಾಸಕರಾದ ಶ್ರೀ ವೆಂಕಟೇಶ ಕೊಂಕಲ್ ರವರು ಮಾತಾನಾಡಿದ ಕಡಿಮೆ ಅವಧಿಯಲ್ಲಿ ಉತ್ತಮ ಕ್ರಿಯಾ ಯೋಜನೆ ಹಾಕಿಕೊಂಡ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ನ್ನು ಸರಳೀಕರಣ ಗೊಳಿಸಬೇಕೆಂದು ಸಲಹೆ ನೀಡಿದರು. ಭಾಷೆಯನ್ನು ನಿತ್ಯ ತರಗತಿ ಕೋಣೆಯಲ್ಲದೇ ದಿನ ನಿತ್ಯದ ವ್ಯವಹಾರದಲ್ಲಿ ಯು ಇಂಗ್ಲೀಷ್ ನ್ನು ಬಳಸುವುದರಿಂದ ಸುಲಭವಾಗಿ ಕಲಿಯಬಹುದು. ಎಂದು ತಿಳಿಸಿದರು.

ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಈಶಪ್ಪ ತಳವಾರ ರವರು ಮಾತಾನಾಡಿ ಸಂಪನ್ಮೂಲ ವ್ಯಕ್ತಿಗಳು ಹೇಳಿದಂತೆ ಬೋಧನೆಯಲ್ಲಿ ಸಾಧನ ಮತ್ತು ತಂತ್ರಾಂಶ ಬಳಸಿ ಫಲಿತಾಂಶದಲ್ಲಿ ಯಶಸ್ಸನ್ನು ಕಾಣಬಹುದು ಎಂದು ತಿಳಿಸಿದರು. ಸ್ಥಳೀಕರಾದ ಸೋಮಶೇಖರ ತುಪ್ಪದರವರು ತಮ್ಮ ತಂದೆತಾಯಿಗಳ ಸ್ಮರಣಾರ್ಥ ಕಾರ್ಯಾಗಾರದಲ್ಲಿ ಭಾಗವಹಿಸಿದ ಶಿಕ್ಷಕರಿಗೆ ಊಟದ ವ್ಯವಸ್ಥೆ ಮಾಡಿದ್ದರು. ಸಂಪನ್ಮೂಲ ವ್ಯಕ್ತಿ ಗಳಾಗಿ ಬಸವರಾಜ ಕಮತರ, ಬದರಿನಾಥ, ವೀರೇಶರವರು ಭಾಗವಹಿಸಿದ್ದರು. ಇಂಗ್ಲೀಷ್ ಪೋರಂ ಅಧ್ಯಕ್ಷರಾದ ಶ್ರೀ ಶಿವಪ್ಪ ಇಲಾಳರವರು ಪ್ರಸ್ತಾವಿಕವಾಗಿ ಮಾತನಾಡಿದರೆ ಸಂಗನಗೌಡ ಮಾಲಿಪಾಟೀಲ್ ರವರು ನಿರೂಪಿಸಿದರು ಜಗದೀಶ ಬಾಸಿಂಗದ ರವರು ವಂದಿಸಿದರು.

English workshop

Sunday, February 14, 2021

ಪರಮನಹಟ್ಟಿ : ಎಸ್ ಎಸ್ ಎಲ್ ಸಿ ಮಕ್ಕಳ ಮನೆಬೇಟಿ.

ಗೈರು ಹಾಜರಿಯಾದ ಎಸ್ ಎಸ್ ಎಲ್ ಸಿ  ಮಕ್ಕಳ ಮನೆಬೇಟಿ ಮಾಡಿ ಪಾಲಕರ ಮನವೊಲಿಸಿ ಶಾಲೆಗೆ ಹಾಜರಾಗಲು ಅಥವಾ ಸ್ವ ಅಭ್ಯಾಸ ಮಾಡಿ ಶಿಕ್ಷಕರ ಮಾರ್ಗದರ್ಶನ ಪಡೆಯಲು ಸೂಚಿಸಲಾಯಿತು.