Friday, February 12, 2021
Tuesday, February 2, 2021
Sunday, January 31, 2021
Saturday, January 30, 2021
Friday, January 29, 2021
Sunday, January 3, 2021
ಶಾಲಾ ಪ್ರಾರಂಭೋತ್ಸವ
ಇಂದು ನಮ್ಮ ಶಾಲೆಯ ಶಾಲಾ ಪ್ರಾರಂಭೋತ್ಸವ ಅದ್ದೂರಿಯಾಗಿ ನಡೆಸಲಾಯಿತು. ಮಕ್ಕಳನ್ನು ಸ್ವಾಗತಿಸಿತ್ತಾ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಶಾಲಾ ವೇಳಾಪಟ್ಟಿಯ ಜೊತೆಗೆ ಕಡ್ಡಾಯವಾಗಿ ಮಾಸ್ಕ ಹಾಕಿಕೊಂಡು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಶಾಲಾ ಚಟುವಟಿಕೆಗಳಲ್ಲಿ ಭಾಗವಹಿಸಲು ತಿಳಿಸಲಾಯಿತು. ೮ ಮತ್ತು ೯ ನೇ ತರಗತಿಯ ಮಕ್ಕಳಿಗೆ ವಿದ್ಯಾಗಮದ ತಂಡಗಳನ್ನು ರಚಿಸಿ ಮಕ್ಕಳಿಗೆ ತಿಳಿಯಪಡಿಸಲಾಯಿತು. ಮಧ್ಯಾಹ್ನದ ಅವಧಿಯಲ್ಲಿ ಶಾಲೆಗೆ ಮಾನ್ಯ ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರು ಬೇಟಿ ನೀಡಿ ಮಕ್ಕಳು ಹಾಗೂ ಶಾಲೆಯ ಕುರಿತು ವಿವರಗಳನ್ನು ತಿಳಿದುಕೊಂಡು ಶಾಲೆಯ ಕುರಿತು ಹರ್ಷ ವ್ಯಕ್ತ ಪಡಿಸುತ್ತಾ, ಶೈಕ್ಷಣಿಕ ವಿಚಾರಗಳ ಕುರಿತು ಸಲಹೆಗಳನ್ನು ನೀಡಿದರು. ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಶ್ರೀಶೈಲ ಸೋಮನಕಟ್ಟಿಯವರು, ಮುಖ್ಯೋಪಾಧ್ಯಾಯರಾದ ಈಶಪ್ಪ ತಳವಾರ, ಸಂಗನಗೌಡ ಮಾಲಿಪಾಟೀಲ್, ಶಿವಪ್ಪ ಇಲಾಳ, ಜಗದೀಶ್ ಬಾಸಿಂಗದ, ತಿಪ್ಪಣ್ಣ ರಾಮದುರ್ಗ, ಬಸಪ್ಪ ಹಿರೇಮನಿ, ಶರಣಪ್ಪ ರಾಂಪೂರ, ರಮೇಶ ಚೌವ್ಹಣ, ಹುಲಿಗೆಮ್ಮ ಹಾಗೂ ಗುರುರಾಜ ಅವರು ಶಾಲೆಯಲ್ಲಿ ಉಪಸ್ಥಿತರಿದ್ದರು.


















