Friday, July 31, 2020

ಚಟುವಟಿಕೆ - ೦೫

ನಾನು ವೀಕ್ಷಿಸಿದ ವಿಡಿಯೋ ಹಾಗೂ ಅವುಗಳ ಟಿಪ್ಪಣಿ 

ರಾಕ್ಷಸ ತಂಗಡಿ
ಇದು ಗಿರೀಶ ಕಾರ್ನಾಡರವರ ನಾಟಕ. ವಿಜಯನಗರ ಸಾಮ್ರಾಜ್ಯದ ಅವನತಿಯ ಕದನವೆಂದು ಕೇಳುವ ನಮ್ಮ ಕಿವಿಗಳಿಗೆ ರಕ್ಕಸ ತಂಗಡಿಯನ್ನು ಕಾರ್ನಾಡರು ಭಿನ್ನವಾಗಿ ನಮ್ಮೆದುರಿಗೆ ಈ ನಾಟಕದ ಮುಖಾಂತರ ತಂದು ಇಡುತ್ತಾರೆ‌.


ಕಾರ್ನಾಡರ ಸಂದರ್ಶನ

ರಾಕ್ಷಸ ತಂಗಡಿಯ ನಾಟಕದ ಕುರಿತು ಕಾರ್ನಾಡರು ತಮ್ಮ ಸಂಶೋಧನೆ ಹಾಗೂ ಸಿಕ್ಕ ದಾಖಲೆಗಳನ್ನು ಇಲ್ಲಿ ಬಿಚ್ಚಿಡುವ ಕಾರ್ಯಗಳನ್ನು ಮಾಡಿದ್ದಾರೆ. ನಾಟಕಕಾರನ ಮಾತಿನಿಂದಲೇ ನಾವು ಅವರ ನಾಟಕದ ಕುರಿತು ಕೇಳಿದಾಗ ಒಬ್ಬ ನಿರ್ದೇಶಕ ಅಥಾವ ನಟನಿಗೆ ದೊರಕುವ ಹೊಳಹುಗಳು ಪ್ರದರ್ಶನದಿಂದಲೇ ಕಾಣಬಹುದು.



ಕೆ ವಿ ಸುಬ್ಬಣ್ಣ ರವರ ಸಂದರ್ಶನ

ನೀನಾಸಂ ಸಂಸ್ಥೆಯ ಸಂಸ್ಥಾಪಕ. ಮೆಗ್ಸಸೆ ಪುರಸ್ಕರವನ್ನು ಪಡೆದ ಮೊದಲ ಕನ್ನಡಿಗ. ಇವರ ಮಾತುಗಳಲ್ಲಿ ಒಂದು ಕೃತಿಯಾಗಿರಲಿ, ಸಂಸ್ಥೆಯಾಗಿರಲಿ ಸಿದ್ದವಾಗುವಾಗ ಇರಬೇಕಾದ ಮೂಲಾಂಶಗಳ ಕುರಿತು ಉದಾಹರಿಸುವ ರೀತಿ ಭಿನ್ನವೇ.


ಈಡಿಪಸ್

ಗ್ರೀಕ್ ನಾಟಕಕಾರ ಸಪೋಕ್ಲಿಸ್ ರಚಿಸಿದ ನಾಟಕವಿದು. ವಿಭಿನ್ನ ಶೈಲಿಯಲ್ಲೇ ರಂಗರೂಪಕ್ಕೆ ತಂದಿರಿಸಿರುವ ನಿರ್ದೇಶಕರು  ಇಡೀ ನಾಟಕವನ್ನು  ಶೈಲೀಕೃತ ವಾಗಿ ಪ್ರದರ್ಶನಕ್ಕೆ ಅಣಿ ಮಾಡಿದ್ದು ವಿಶೇಷ 


ಆಗಲಿ ಇರಲಾರೆನೋ 

ಇದೊಂದು ರಂಗ ಗೀತೆಯಾಗಿದ್ದು ಸಂಭಾಶಿವ ಪ್ರಹಾಸನ ನಾಟಕದಲ್ಲಿ ಬರುವ ವಿಶಿಶ್ಟವಾದ ರಂಗಗೀತೆ ವಿರಹದ ವೇದನೆನ್ನು ಹಾಡಾಗಿಸುವ ನಿರ್ದೇಶಕರ ಕಲಾತ್ಮಕತೆ ಅದ್ಭುತವಾದದ್ದು



ಸಂಗ್ಯಾ ಭಾಳ್ಯ 

ಪುಟ್ಟಣ್ಣ ಮಾಸ್ತರರು ರಚಿಸಿದ ನಾಟಕ. ಜನಪದ ರಂಗಭೂಮಿಯಿಂದ ಹರಿದು ಬಂದ ಈ ಕಥಾ ನಾಟಕವನ್ನು ನೀನಾಸಂ ಸಂಸ್ಥೆ ಸುಂದರವಾಗಿ ಕಾವ್ಯಾತ್ಮಕವಾಗಿ ಕಟ್ಟಿಕೊಟ್ಟ ನಾಟಕವಿದು. ಕನ್ನಡದ ದುರಂಥ ನಾಯಟಕವೆಂದು ಹೇಳ್ಬೇಕು


ಓದಿರಿ 

ಪ್ರವಾದಿ ಮಹ್ಮದ್ ಪೈಗಂಬರ ಜೀವನಾಧಾರಿತ  ಐತಿಹಾಸಿಕ ನಾಟಕ ಇಂಟಿಮೇಟ್ ನಾಟಕವನ್ನು ಗಣೇಶ್ ಅವರು ಚೆಂಡವಾಗಿ ಕಟ್ಟಿ ಕೊಟ್ಟಿದ್ದಾರೆ.


ಎನಿಮಿ ಆಫ್ ದಿ ಪೀಪಲ್ (ಸಮಾಜದ್ರೋಹಿ)

ಇಬ್ಸನ ರವರ ನಾಟಕ ರಾಜಕಾರಣದ  ಅತಿ ಸೂಕ್ಷ್ಮ ಒತ್ತಡಕ್ಕೆ ಸಿಗುವ ಡಾ ಸ್ಟಾಕಮನ್
ಪೀಟರ್ ಸ್ಟಾಕ್ಮನ್ ಒಳ ತಂತ್ರಗಳಿಗೆ ಬಲಿಯಾಗುವ ಸ್ಥಿತಿಯ ನಾಟಕ ೧೯ ನೇ ಶತಮಾನದ ಕಥೆ ಪ್ರಸ್ತುತತೆಗೆ ಆಗುವ ಹೊಂದಾಣಿಕೆಯನ್ನು ಕಾಣಬಹುದು


ಕರ್ಣಾದರ್ಶ 

ಕರ್ಣಾಟ ಭಾರತದ ಕಥಾಮಂಜರಿಯನ್ನು ಹಿನ್ನೆಲೆಯಲ್ಲಿ ಕರ್ಣನ ಕುರಿತು ಮಾಡಿರುವ ಪ್ರಯೋಗ. ಕರ್ಣನ ಮೇಲೆ ಆಗುವ ಮೋಸಗಳು ಅವನನ್ನು ಬಳಿ ತೆಗೆದು ಕೊಳ್ಳುತ್ತವೆ. ನಾಲ್ಕು ನಟರೇ ಒಂದು ಗಂಟೆಗಳ ಕಾಲ ಪ್ರೇಕ್ಷಕರನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವಂಥ ನಾಟಕ 



ಕಲಿ ಕಲಿಸು 

ಐ.ಎಫ್.ಎ ಸಂಸ್ಥೆಯಡಿ ರಾಜ್ಯದ ಮಾದರಿ ಶಾಲೆಗಳ ಸೃಜನಾತ್ಮಕ ಕಾರ್ಯಗಳನ್ನು ಚಿತ್ರೀಕರಿಸಿ ಇತರರಿಗೆ ಮಾದರಿಯಾಗಿ ತೋರ್ಪಡಿಸಿದ್ದಾರೆ. ಅದರಲ್ಲಿ ನಮ್ಮ ಶಾಲೆಯು ಒಂದು ಭಾಗವಾಗಿರುವುದು ವಿಶೇಷ 



ಕಲಿ ಕಲಿಸು ಮೊಹರಂ ನೃತ್ಯ 

ನಮ್ಮ ಶಾಲೆಯ ದಾಖಲೀಕರಣದ ವೇಳೆಯಲ್ಲಿ ನಮ್ಮ ಗ್ರಾಮೀಣ ಕಲೆ ಹಾಗು ಆಚರಣೆಯ ನಿಮಿತ್ಯ ಆಡುವ ಮೊಹರಂನ ಹೆಜ್ಜೆ ಕುಣಿತವನ್ನು ನಮ್ಮ ವಿದ್ಯಾರ್ಥಿಗಳು ಪ್ರಸ್ತುತ  ಪಡಿಸುತ್ತಿರುವುದು.

No comments:

Post a Comment